Chief Editor
Manohar. R (Manu)
Photo Journalist
chitrataramanu@gmail.com
+91 9845549026
ಜಾಸ್ಮಿನ್ ಡಾಟ್-೫ ನಲ್ಲಿ ಹೊಡೆದಾಟ
Posted date: 14 Thu, Nov 2013 – 11:10:05 AM

ಅಂದು ನಗರದಲ್ಲೆಲ್ಲ ಹೋಳಿ ಹಬ್ಬದ ಸಡಗರ. ಇದೇ ಸಂದರ್ಭದಲ್ಲಿ ನಾಯಕನ ತಂಗಿ ಶಾಲೆಗೆ ಹೋಗುತ್ತಿರುವಾಗ ೫ ಜನ ಕಿಡಿಗೇಡಿಗಳು ಆಕೆಯ ಮೇಲೆ ಬಣ್ಣ ಹಾಕುವುದಲ್ಲದೆ ಅಸಭ್ಯವಾಗಿ ನಡೆದುಕೊಳ್ಳುತ್ತಾರೆ. ಈ ವಿಷಯ ತಿಳಿದು ಅಲ್ಲಿಗೆ ಬಂದ  ನಾಯಕ ಮೋಹನ್ ಅವರೊಂದಿಗೆ ಹೊಡೆದಾಡುವ ದೃಶ್ಯವನ್ನು ಭವ್ಯಾಸ್ಮಿ ಮೂವೀಸ್ ಕ್ರಿಯೇಷನ್ಸ್ ತಯಾರಿಸುತ್ತಿರುವ ಜಾಸ್ಮಿನ್ ಡಾಟ್-೫ ಚಿತ್ರಕ್ಕಾಗಿ ಕಳೆದ ವಾರ ಜೆ.ಪಿ.ನಗರ ಮೈದಾನದಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು.
    ವಿ,ಕೃಷ್ಣ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಪ್ರಸನ್ನಕುಮಾರ ಛಾಯಗ್ರಹಣ, ಎಂ.ಸಂಜೀವ್ - ಶ್ರೀ ಹರ್ಷ ಸಂಗೀತ, ಹರಿಕೃಷ್ಣ - ಮನು ನೃತ್ಯ ನಿರ್ದೇಶನ, ಅಲ್ಟಿಮೆಟ್ ಶಿವು ಸಾಹಸ, ಶ್ರೀಕಾಂತ ಸಂಕಲನ, ಕೃಷ್ಣ ಸಾಹಿತ್ಯವಿದೆ.  ಮೋಹನ್, ನವ್ಯ, ಸಂಗೀತ, ಭವ್ಯ, ಅವಿನಾಶ್, ಗಿರಿಜಾ ಲೋಕೇಶ್, ಪದ್ಮಜಾ ರಾವ್, ಹೊನ್ನವಳ್ಳಿಕೃಷ್ಣ, ಗೌತಮ್ ಹೇಮಂತ್, ಕಿಶೋರಶೆಟ್ಟಿ, ಲಕ್ಷ್ಮೀದೇವಮ್ಮ, ಮುರುಳಿ, ಪ್ರಕಾಶ್ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಜಾಸ್ಮಿನ್ ಡಾಟ್-೫ ನಲ್ಲಿ ಹೊಡೆದಾಟ - Chitratara.com
Copyright 2009 chitratara.com Reproduction is forbidden unless authorized. All rights reserved.